Saturday 19 July 2014

 ಪರಿಸರ ದಿನಾಚರಣೆ... ನಮ್ಮ ಶಾಲಾ ಪುಟಾಣಿಗಳಿಂದ


ನೈಸರ್ಗಿಕ ಸಂಪತ್ತನ್ನು ಮಿತವಾಗಿ ಬಳಸಿ ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಗ್ಗೆ ಶಾಲಾ ಹಂತದಿಂದಲೇ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ನಮ್ಮ  ಶಾಲೆಯಲ್ಲಿ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಬ್ಬಾಸ್. ಕೆ. ಮತ್ತು ಹಿರಿಯ ಶಿಕ್ಷಕ ಕೃಷ್ಣ ಕುಮಾರ್ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಪ್ರತಿ ಮಗು ಗಿಡಗಳನ್ನು ನೆಟ್ಟು ತಾನು ಬೆಳೆಯುವುದರ ಜೊತೆಗೆ ಮರವನ್ನು ಬೆಳೆಸುವದರ ಮೂಲಕ ಸಾಮಾಜಿಕ  ಜವಾಬ್ದಾರಿ ನಿರ್ವಹಿಸಿ ಉತ್ತಮ ನಾಗರಿಕರಾಗಬೇಕೆಂದು ಕೃಷ್ಣ ಕುಮಾರ್ ಕರೆ ನೀಡಿದರು. ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಸ್ಲೈಡ್ ಶೋ ಕಾರ್ಯಕ್ರಮ ಜರಗಿತು, ಎಲ್ಲ ಜೀವರಾಶಿಗಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಪರಿಸರವು ಸಂರಕ್ಷಣೆ ನೀಡುತ್ತದೆ ಹಾಗೆಯೇ ಪರಿಸರ ರಕ್ಷಿಸುವ ಮೂಲಕ ನಾವು ಅದರ ಋಣ ತೀರಿಸುವ ಕಾರ್ಯ ಮಾಡಬೇಕಾಗಿದೆಯೆಂದು ಶಿಕ್ಷಕ ಪ್ರವೀಣ್  ಅಭಿಪ್ರಾಯಪಟ್ಟರು. ಬಳಿಕ ನಡೆದ ಜಾಗೃತಿ ಮೆರವಣಿಗೆಯಲ್ಲಿ ಶಿಕ್ಷಕರಾದ ಜಾಫರ್ , ಪೂರ್ಣಿಮಾ ಮಾತೃ ಸಂಘದ ಸದಸ್ಯೆಯರು, ಪಾಲ್ಗೊಂಡರು. ಶಾಲೆಯ ಎಲ್ಲ ಪುಟಾಣಿಗಳು ಉತ್ಸಾಹದಿಂದ ಭಾಗವಹಿಸಿದ್ದ ಕಾರ್ಯಕ್ರಮದ ಕೊನೆಗೆ ಮಕ್ಕಳು ತಮ್ಮ ಸ್ವಂತ ಆರೈಕೆಯಲ್ಲಿ ಬೆಳೆಸಲು ಸಸಿಗಳನ್ನು ವಿತರಿಸಲಾಯಿತು.

ಪುಟ್ಟ ಕರಗಳಲ್ಲಿ ಹಸಿರು ಚಿಗುರೋಡೆಯಲೆಂದೇ ನಮ್ಮ ಹಾರೈಕೆ 


ಜಾಗೃತಿ ಮೆರವಣಿಗೆ



ಗಿಡ ವಿತರಣೆ 
















No comments: