Wednesday 30 September 2015

CONGRATULATIONS!!!



കാസർഗോഡ് ജില്ലാ പഞ്ചായത്തിന്‍റെ  ആഭിമുഖ്യത്തിൽ കലക്ട്രേറ്റിലെ അക്ഷര ലൈബ്രറി  സർക്കാർ ജീവനക്കാർകും അധ്യാപകർക്കും വേണ്ടി സംഘടിപ്പിച്ച ജില്ലാതല കവിതാലാപന മത്സരത്തിൽ  ജി.ബി.എൽ.പി സ്കൂൾ ഹേരൂരിലെ അധ്യാപകനാകൃഷ്ണ കുമാർ പള്ളിയത്ത് ഒന്നാം സ്ഥാനം നേടിയ വിവരം അഭിമാനപൂര്‍വ്വം പങ്കുവെയ്കുന്നു.. 
വയലാരിന്‍റെ “ശ്രീ നാരായണഗുരു” എന്ന കവിത വളരെ ഭാവാത്മകമായി ആലപിച്ചാണ് സമ്മാനം കരസ്ഥമാക്കിയത്. നിരവധി മത്സരവേദികളില്‍ ഇദേഹം തന്‍റെ കാവ്യാലാപന മാധുര്യത്താൽ ശ്രോതാക്കളുടെ മനം കവര്‍ന്നിട്ടുണ്ട്. കവിതാ റിയാലിറ്റി ഷോയിൽ സംസ്ഥാന തലത്തി.ല്‍   സ്വര്‍ണ മെഡ.ല്‍ ജേതാവു കൂടിയാണ് കൃഷ്ണ കുമാർ പള്ളിയത്ത്...

ಕಾಸರಗೋಡು ಜಿಲ್ಲಾ ಪಂಚಾಯತ್ ಸಾರಥ್ಯದಲ್ಲಿ ಸರಕಾರಿ ಉದ್ಯೋಗಸ್ಥರಿಗೆ ಕಾಸರಗೋಡ್ ಸಿವಿಲ್ ಸ್ಟೇಷನ್ ನಲ್ಲಿ ನಿನ್ನೆ ನಡೆದ ಅಕ್ಷರ ಲೈಬ್ರರಿ – ಕವಿತಾಲಾಪನೆ ಸ್ಪರ್ಧೆಯಲ್ಲಿ ನಮ್ಮ ಶಾಲಾ ಅಧ್ಯಾಪಕಾರಾದ ಕೃಷ್ಣ ಕುಮಾರ್ ಪಳ್ಳಿಯತ್ ಪ್ರಥಮ ಪಾರಿತೋಷಿಕ ಪಡೆದ ವಿಷಯವನ್ನು ಸಂತೋಷಪೂರ್ವಕ ಹಂಚಿಕೊಳ್ಳುತ್ತಿದ್ದೇವೆ. ೨೯-೯-೨೦೧೫ ರಂದು ಸಮಾರಂಭದಲ್ಲಿ ಜಿಲ್ಲಾಧಿಕಾರಿ ಪಿ.ಯಸ್ ಮೊಹಮ್ಮದ್ ಸಗೀರ್ ಅವರಿಂದ ಕ್ಯಾಶ್ ಅವಾರ್ಡ್ ಮತ್ತು ಪ್ರಶಸ್ತಿ ಸ್ವೀಕರಿಸಿದರು.  ಕೃಷ್ಣ ಕುಮಾರ್ ಪಳ್ಳಿಯತ್ ಅವರಿಗೆ ನಮ್ಮ ಶಾಲಾ ಪರವಾಗಿ ಅಭಿನಂದನೆಗಳು. 

Tuesday 29 September 2015

Results of MANJESHWAR SUB-DISTRICT 

MATHEMATICS SEMINAR / PAPER PRESENTATION COMPETION 2015-16

                  at GBLPS MANGALPADY on 28-09-2015

U.P SEMINAR
First Place : K.S Swarna       VII       Don Bosco A.U.P. School., Kayyar
Second Place : Varsha M.R   VI        St. Joseph's A.U.P.S., Kaliyoor
Third Place : Jyothika C.T     VI       S.S.A.U.P.S., Chevar

H.S Bhaskaracharya Seminar
First Place : Avvamath Yasmin           Al-Saquaf E.M S, Udyawar
Second Place : Mohammad Thanzil      S.D.P.H.S, Dharmathadka
Third Place : Fathimath Thafseera        Udaya H.S.S. Manjeshwara

H.S Ramanujan Paper Presentation
First Place :Athifa Abdulla           M.B.E.M.S., Dharmanagar
Second Place :Shravya D Uchil   G.H.S.S.Mangalpady
Third Place :Nikhitha                  S.A.T.H.S., Manjeshwara
                     
Congratulations Winners....

Tuesday 22 September 2015


HSS Section
First Place: AJAY KUMAR K   (+2)    GHSS PAIVALIKE NAGAR 
Second Place: AHAMMED HASEEB  (+1)  GHSS BEKUR 

 HS SECTION
First Place: ASHAYA K M     ( 10th)        GHSS PAIVALIKE  

Second Place: KHADER ZISHAN ALI  (10th)    SIRAJUL HUDA EMHS UDYAWAR 
   
UP SECTION
First Place:SINJITHA K  (6th)  AUPS DHARMATHADKA 

Second Place: VISHWAJITH K  (6th)   SDPAUPS SAJANKILA

LP SECTION 
First Place: IBRAHIM THOUFEER  (4th ) V.A.U.P.S MEEYAPADAV

Second Place : HABEEB RAHMAN   (4th)     GWLPS MANJESHWAR 
                     
Congratulations Winners....

Monday 21 September 2015

ಸೆ : 21 ಇಂದು ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರುಗಳ ಸಮಾಧಿ ದಿನ.


          ಕೇರಳದ ತಿರುವನಂತಪುರ ಬಳಿಯ ಚೆಂಪಜಂತಿಯಲ್ಲಿ ಸಾಮಾನ್ಯ ಮಧ್ಯಮ ವರ್ಗದ ಈಳವರ ಕುಟುಂಬದಲ್ಲಿ ಜನಿಸಿದ ಈ ನಾರಾಯಣ, ನಂತರದ ದಿನಗಳಲ್ಲಿ ಗುರುವಾಗಿ ಬದಲಾದರು. ಅವರು ಮದನ್ ಆಸನ್ ಮತ್ತು ಕೊಚ್ಚು ಪೆಣ್ಣು ದಂಪತಿಯ ಏಕೈಕ ಪುತ್ರ ಸಂತಾನ(ಜನನ 1856ರ ಆ.22). ಆಸನ್ ಎಂದರೆ ಆಚಾರ್ಯ ಎಂದರ್ಥ. ಹೀಗಾಗಿ ನಾರಾಯಣ ಗುರುಗಳ ತಂದೆ ಮದನ್ ಆಸನ್, ಉಪಾಧ್ಯಾಯ ಕೆಲಸ ಮಾಡಿರಬಹುದು. ತಮ್ಮ ಮಗನಿಗೆ ಇಟ್ಟ ಹೆಸರು ನಾರಾಯಣ. ಹೆತ್ತವರು ಪ್ರೀತಿಯಿಂದ ನನೂ ಎಂದೂ ಕರೆಯುತ್ತಿದ್ದರು.
          ಬಸವಣ್ಣನಂತೆ ಜಾತಿ ವ್ಯವಸ್ಥೆ ವಿರುದ್ಧ ಆಂದೋಲನಗಳನ್ನು ನಡೆಸಿದ ನಾರಾಯಣ ಗುರು, ಶೋಷಿತರ ಉದ್ಧಾರಕ. ಇವರ ಅಂದಿನ ಕೆಲಸಗಳತ್ತ ಕಣ್ಣಾಯಿಸಿದರೆ, 'ನಾರಾಯಣ ಗುರುದೇವನಿಗಿಂತ ಶ್ರೇಷ್ಠನಾದ ಮತ್ತೊಬ್ಬ ಗುರುವನ್ನು, ಕೆಚ್ಚೆದೆಯ ಮತ್ತೊಬ್ಬ ಸುಧಾರಕನನ್ನು, ಪವಿತ್ರನಾದ ಸಂತನನ್ನು, ಮೇಲಾಗಿ ಅವರನ್ನು ಮೀರಿಸುವ ರಾಷ್ಟ್ರ ನಿರ್ಮಾಪಕನನ್ನು ಇಂಡಿಯಾ ಕಂಡಿಲ್ಲ' ಎನ್ನುವ ಸ್ವಾಮಿ ಧರ್ಮತೀರ್ಥರ ಮಾತಿನಲ್ಲಿ ಅತಿಶಯವೇನಿಲ್ಲ ಅನ್ನಿಸುತ್ತದೆ.
                ಬಾಲ್ಯದಲ್ಲಿಯೇ ನಾರಾಯಣ, ತಮ್ಮ ವಿಚಾರಗಳಿಂದ ಎಲ್ಲರ ಗಮನ ಸೆಳೆದರು. ನೈವೇದ್ಯಕ್ಕೆ ಇಟ್ಟಿದ್ದ ತಿಂಡಿತಿನಿಸು ಅಥವಾ ಹಣ್ಣುಗಳನ್ನು ಅವರು ತಿಂದು ಬಿಡುತ್ತಿದ್ದರು. ಈ ಕೃತ್ಯವನ್ನು ಪ್ರಶ್ನಿಸಿದರೆ, ''ದೇವರು ತಾನೇ ಸಷ್ಟಿಸಿದ ವಸ್ತುಗಳನ್ನು ತಾನೇ ತಿಂದರೆ ಜೀವಿಗಳ ಗತಿಯೇನು? ಅವನು ಮನುಷ್ಯರ ಮುಖಾಂತರವೇ ತಿನ್ನಬೇಕು. ಮಕ್ಕಳು ತಿಂದರಂತೂ ಅವನಿಗೆ ಹೆಚ್ಚಿನ ತಪ್ತಿ,'' ಎನ್ನುವ ಮೂಲಕ ನಾರಾಯಣ, ಹೆತ್ತವರ ಬಾಯಿ ಮುಚ್ಚಿಸುತ್ತಿದ್ದ.
                ಒಂದು ಸಲ ಕೆಳ ಜಾತಿಯವರು ಒಲೆಯ ಮೇಲೆ ಗಂಜಿ ಇಟ್ಟು ಬೇರೆ ಇನ್ನೇನೋ ಕೆಲಸದಲ್ಲಿ ತೊಡಗಿದ್ದರು. ಅದೇ ಮಾರ್ಗದಲ್ಲಿ ಬಂದ ನಾರಾಯಣ, ಕಾದು ಉಕ್ಕುತ್ತಿದ್ದ ಗಂಜಿಯನ್ನು ಕೆಳಕ್ಕೆ ಇಳಿಸಿದ್ದ. ಈ ಬಗ್ಗೆ ತಂದೆ ಆಕ್ಷೇಪಿಸಿದಾಗ, 'ನಾನು ಗಂಜಿಯನ್ನು ಕೆಳಗೆ ಇಳಿಸದಿದ್ದರೆ, ಆ ಕುಟುಂಬ ಹಸಿವಿನಿಂದ ಇಂದು ಸಾಯಬೇಕಿತ್ತು' ಎಂದಿದ್ದ. ನಾರಾಯಣ ಗುರುಗಳ ಬಗ್ಗೆ ದೇಜಗೌ ಬರೆದಿರುವ ಪುಸ್ತಕದಲ್ಲಿ ಇಂಥ ಅನೇಕ ಘಟನೆಗಳು ದಾಖಲಾಗಿವೆ.
                ಶೂದ್ರರ ಶಿಕ್ಷಣಕ್ಕೆ ದೇಶದೆಲ್ಲೆಡೆ ವಿರೋಧವಿದ್ದ ಕಾಲವದು. ಆದರೆ ಕೇರಳದಲ್ಲಿ ವಾತಾವರಣ ಅಷ್ಟು ಹದಗೆಟ್ಟಿರಲಿಲ್ಲ. ಹೀಗಾಗಿ ನಾರಾಯಣ ಗುರು ವ್ಯಾಸಂಗಕ್ಕೆ ಅಷ್ಟಾಗಿ ತೊಡಕಾಗಲಿಲ್ಲ. ವಂಶಪಾರಂಪರ್ಯವಾಗಿ ಬಂದಿದ್ದ ವೈದ್ಯ ವೃತ್ತಿಯನ್ನೂ ಅವರು ಮರೆತಿರಲಿಲ್ಲ. ವಿದ್ಯಾರ್ಥಿ ದಿನಗಳಲ್ಲಿಯೇ ಅವರು ಬಡವರ ಗುಡಿಸಲುಗಳಿಗೆ ಹೋಗಿ, ಔಷಧ ಕೊಟ್ಟು ಬರುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಧೈರ್ಯ ತುಂಬುತ್ತಿದ್ದರು. ಬದುಕಿನ ಕೊನೆ ಉಸಿರಿರುವ ತನಕ, ಆರೋಗ್ಯಕರ ಸಮಾಜಕ್ಕಾಗಿ ಇವರ ಮನಸ್ಸು ಮಿಡಿಯುತ್ತಿತ್ತು.


Sunday 20 September 2015



1. Sampoorna  Username ಮತ್ತು Password ಬಳಸಿ Login ಆಗಿರಿ. . 
2. 6th working day ಯಲ್ಲಿರುವ classwise strength ನ ಆಧಾರದಲ್ಲಿ classwise print ಎಂಬ ಮೆನುವಿನಲ್ಲಿ ಕ್ಲಿಕ್ ಮಾಡಿ ಕ್ಲಾಸ್ ಮತ್ತು ಡಿವಿಶನ್ ಸೆಲೆಕ್ಟ್ ಮಾಡಿ ಪ್ರಿಂಟ್ ತೆಗೆಯಬಹುದು. 
3. ಮಕ್ಕಳ ಸಂಖ್ಯೆಯು 6th workingday ಸಂಖ್ಯೆಗಿಂತ ಹೆಚ್ಚಿದ್ದರೆ printout view ನಲ್ಲಿ remove button ಉಪಯೋಗಿಸಿ ತಾತ್ಕಾಲಿಕವಾಗಿ ಮಕ್ಕಳನ್ನು delete ಮಾಡಬಹುದು. 
4. ತಾತ್ಕಾಲಿಕವಾಗಿ delete ಮಾಡಿದ ಮಕ್ಕಳನ್ನು ಪುನಃ ಸೇರಿಸಲು reset student ಎಂಬ link click ಮಾಡಬೇಕು. 
5. Print View ನಲ್ಲಿ ಮಕ್ಕಳ ಸಂಖ್ಯೆಯು 6th workingday strength ಗಿಂತ ಕಡಿಮೆಯಿದ್ದರೆ printout ತೆಗೆದು ಕೊನೆಯಲ್ಲಿ 6th workingday ಯ ಬಳಿಕ T.C ಕೊಟ್ಟ ಮಕ್ಕಳ ವಿವರಗಳನ್ನು ಬರೆದು ಸೇರಿಸಬೇಕು. 
6. UID ಇಲ್ಲದವರು Entry form EID ಎಂಬ ಲಿಂಕಿನಲ್ಲಿ ಕ್ಲಿಕ್ ಮಾಡಿ EID ಸೇರಿಸಬೇಕು. 
7. Sampoorna ದಲ್ಲಿ UID ಇಲ್ಲದ ಮಕ್ಕಳ UID, Entry Form EID/UID link click ಮಾಡಿ ಸೇರಿಸಬಹುದು. 
6th working day WEBSITE.
Contact Address
Email: sixthworkday@gmail.com
DPI Office:0471-2580515
IT@School Project:0471- 2529800
UID/EID
ವಿವರಗಳನ್ನು ಅಕ್ಟೋಬರ್ 15 ರ ಮೊದಲು update ಮಾಡಬೇಕು

Thursday 17 September 2015


|| ಭಾಂದವ್ಯ ಬೆಸೆಯುವ ರಾಷ್ಟ್ರೀಯ ಹಬ್ಬ ಗಣೇಶ ಚತುರ್ಥಿ ||

                ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಗಣೇಶ ಚೌತಿ ಹಿಂದುಗಳ ಪವಿತ್ರ ಹಬ್ಬ. ಶ್ರೀ ವರಸಿದ್ಧಿ ವಿನಾಯಕ ವ್ರತವನ್ನು ಆಚರಿಸುವ ದಿನ. ಭಾದ್ರಪದ ಮಾಸದ ಶುಕ್ಲ ಚತುರ್ಥಿಯು ಶ್ರೀ ಗಣೇಶನ ಜನ್ಮ ದಿನ ಎನ್ನಲಾಗುತ್ತದೆ. ಹೀಗಾಗಿ ಇದು ಧಾರ್ಮಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ.
                ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು 1893ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದರು. ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ, ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ. ದೇಶದ ವಿವಿಧೆಡೆಗಳಲ್ಲಿ ವಿಜೃಂಭಣೆಯಿಂದ ನಡೆಯುವ ಚೌತಿ ಹಬ್ಬವು ಇಂದು ಬಹುತೇಕ ಸಾರ್ವಜನಿಕ ಗಣೇಶೋತ್ಸವಗಳೊಂದಿಗೆ ಸೇರಿಹೋಗಿದೆ. ಯಾಕೆಂದರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸಂಘಗಳ ಕಾರ್ಯಚಟುವಟಿಕೆ ಆ ರೀತಿ ಇದೆ. ಕರಾವಳಿ ಕರ್ನಾಟಕದಲ್ಲಂತೂ ಚೌತಿಎಂಬುದು "ಮನೆ ಮನೆಗಳಲ್ಲಿ ಆರಾಧನೆಎನ್ನುವುದಕ್ಕಿಂತಲೂ ಸಾರ್ವಜನಿಕ ಗಣೇಶೋತ್ಸವದೊಂದಿಗೆ ಸೇರಿ ಮಾಡುವ ಆಚರಣೆಎನ್ನುವಷ್ಟರ ಮಟ್ಟಿಗಿದೆ. ಇತ್ತೀಚಿನ ವರ್ಷ ಗಳಲ್ಲಂತೂ ಗಣೇಶೋತ್ಸವ ಸಮಿತಿಗಳ ಮೂಲಕವೇ ಚೌತಿನಡೆಯುವಂತಾಗಿದೆ.
                ಈಗ ಒಂದು, ಮೂರು, ಐದು, ಏಳು... ಹೀಗೆ ನಿಗದಿತ ದಿನಗಳವರೆಗೆ ಸಾರ್ವಜನಿಕವಾಗಿ ಗಣೇಶನ ಮೂರ್ತಿಯನ್ನು ನಿರ್ದಿಷ್ಟ ಸ್ಥಳದಲ್ಲಿಟ್ಟು  ಅದನ್ನು ವಿಸರ್ಜಿಸುವುದಕ್ಕೆ ಮಾತ್ರ ಸಾರ್ವಜನಿಕ ಗಣೇಶೋತ್ಸವ ಸೀಮಿತವಾಗುಳಿದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಷ್ಟೆ ಪ್ರಾಮುಖ್ಯತೆ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ಗಳಿಗೂ ಗಣೇಶೋತ್ಸವಗಳಲ್ಲಿ ದೊರೆಯುತ್ತಿದೆ ಎಂಬುದು ಉಲ್ಲೇಖನೀಯ.

                ಗಣೇಶೋತ್ಸವ ಸಮಿತಿಗಳು ಒಂದು ನಿರ್ದಿಷ್ಟ ಧರ್ಮದ ಜನರನ್ನು ಒಳಗೊಂಡಿರುವ ಸಮಿತಿಗಳಾಗಿ ಉಳಿದಿಲ್ಲ. ಅದರಲ್ಲಿ ಹಿಂದೂಯೇತರ ಧರ್ಮ ಬಾಂಧವರು ಕೂಡ ಸಕ್ರಿಯವಾಗಿ ಗುರುತಿಸಿಕೊಂಡಿರುವುದನ್ನು ಕರಾವಳಿಯ ಈ ಭಾಗದ ಅಲ್ಲಲ್ಲಿ ನಾವು ಕಾಣುತ್ತಿದ್ದೇವೆ. ಇದು ಸಣ್ಣತನ, ಸಂಕುಚಿತ ಭಾವವನ್ನು ಮೀರಿದ ಬೆಸುಗೆಯೇ ಸರಿ. ಸಕಲ ಬ್ಲಾಗರ್ ಗಳಿಗೆ, ಹಿತೈಷಿಗಳಿಗೆ, ಆತ್ಮೀಯರಿಗೆ ಚೌತಿ ಹಬ್ಬದ ಶುಭಾಶಯಗಳು.


ಕೃಪೆ: ಗೂಗಲ್ 

Wednesday 16 September 2015

ಸೆಪ್ಟೆಂಬರ್.16 ವಿಶ್ವ ಓಝೋನ್ ದಿನ

Saturday 5 September 2015

ಶ್ರೀ ಕೃಷ್ಣಾಷ್ಟಮಿ ಶುಭಾಶಯಗಳು..



ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಹಬ್ಬವನ್ನು ಶ್ರವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಆಚರಿಸುತ್ತಾರೆ. ಇದು ಶ್ರೀ ಕೃಷ್ಣನ ಜನ್ಮದಿನ. ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ೦ದು ರೋಹಿಣಿ ನಕ್ಷತ್ರದಲ್ಲಿ ಚ೦ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. ಭಾರತ ಹಾಗೂ ವಿದೇಶೀ ನೆಲದಲ್ಲಿಯೂ ಪ್ರಖ್ಯಾತವಾಗಿದೆ ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಆಚರಿಸಲಾಗುತ್ತದೆ  ಕೃಷ್ಣನ ಭಕ್ತರುವಿಶ್ವದ ನಾನಾ ಮೂಲೆಗಳಲ್ಲಿರುವುದರಿಂದ ಇದು ಅಷ್ಟು ಪ್ರಖ್ಯಾತವಾಗಿದೆ. ಕೃಷ್ಣಾಷ್ಟಮಿಯನ್ನು ಎರಡು ದಿನಗಳಲ್ಲಿ ಆಚರಿಸಲಾಗುತ್ತದೆ. ಮೊದಲನೆ ದಿನ ಹುಟ್ಟಿದ ಸಂಭ್ರಮವಾದರೆ ಮಾರನೆಯ ದಿನ ಕಾರ್ಯಕ್ರಮಗಳು ವಿಜೃಂಭಿಸುತ್ತವೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡುಗಳಲ್ಲಿ  ಕೃಷ್ಣಾಷ್ಟಮಿ ಬಹಳ ವೈಭವೋಪೇತವಾಗಿ ನಡೆಯುತ್ತದೆ.ಉತ್ತರಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಮಥುರಾದಲ್ಲಿ ಜುಲನೋತ್ಸವ ಪ್ರಸಿದ್ಧಿ.ದೇವಸ್ಥಾನಗಲ್ಲಿ ,ಮನೆಮನೆಗಳಲ್ಲಿ ಉಯ್ಯಾಲೆ ತೊಟ್ಟಿಲು ಕಟ್ಟುತ್ತಾರೆ.ಅಷ್ಟಮಿಗೆ ತಿಂಗಳ ಮುಂಚೆಯೇ ಈ ತಯಾರಿ ,ಸಂಭ್ರಮ ನಡೆಯುತ್ತದೆ.
          ಜನ್ಮಾಷ್ಟಮಿಯಂದು ಅನೇಕ ಆಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ: ಉಪವಾಸಮಾಡುವುದು ಈ ಹಿಂದೂ ಹಬ್ಬದಲ್ಲಿ ಸಾಮಾನ್ಯ ಆಚರಣೆಯಾಗಿದೆ. ಇದನ್ನು ಜನ್ಮಾಷ್ಟಮಿ ವ್ರತವೆಂದು ಕರೆದು, ಕೃಷ್ಣನ ಭಕ್ತರು 24 ಗಂಟೆಗಳ ಕಾಲ ಉಪವಾಸವನ್ನು ಮಾಡುತ್ತಾರೆ. ಜನ್ಮಾಷ್ಟಮಿ ಉಪವಾಸಮಾಡುವಾಗ ಕೆಲವರು ಹಣ್ಣನ್ನು ತಿಂದರೆ ಇನ್ನುಳಿದವರು ಏನನ್ನೂ ತಿನ್ನದೆ ಕೇವಲ ನೀರನ್ನು ಮಾತ್ರ ಕುಡಿದು ಮಧ್ಯರಾತ್ರಿಯವರೆಗೆ ಪ್ರಾರ್ಥನೆ ಮಾಡುತ್ತಿರುತ್ತಾರೆ. ಶ್ರೀ ಕೃಷ್ಣನು ಮಧ್ಯರಾತ್ರಿ 12 ಗಂಟೆಗೆ ಜನ್ಮತಾಳಿದನೆಂದು ಜನಗಳ ನಂಬಿಕೆ. ಈ ಸಮಯದಲ್ಲಿಯೇ ಭಕ್ತರು ತುಂಟ ಮಾಖನ್ ಚೋರ್' (ಬೆಣ್ಣೆ ಕಳ್ಳ) ಕೃಷ್ಣನನ್ನು ಕುರಿತು ಪ್ರಾರ್ಥನೆ ಮಾಡಿದ ನಂತರ ಉಪವಾಸವನ್ನು ಕೊನೆಗೊಳಿಸುತ್ತಾರೆ. ಹೀಗೆ ಜನ್ಮಾಷ್ಟಮಿಯಂದು ಉಪವಾಸವನ್ನು ಶ್ರದ್ಧೆಯಿಂದ ಆಚರಿಸುವುದರಿಂದ ಸಾಧಾರಣವಾಗಿ ಏಕಾದಶಿಯಂದು ಉಪವಾಸ ಆಚರಿಸುವುದಕ್ಕಿಂತಾ ಒಂದು ಸಾವಿರ ಪಟ್ಟು ಹೆಚ್ಚು ಪರಿಣಾಮಕಾರಿಯೆಂದು ಭಕ್ತರ ನಂಬಿಕೆ. ಈ ಸಂದರ್ಭದಲ್ಲಿ ತಯಾರಿಸುವ ತಿಂಡಿಗಳು ಹೆಚ್ಚಾಗಿ ಹಾಲಿನಿಂದಲೇ ಮಾಡಲಾಗುತ್ತದೆ.ಕೃಷ್ಟ್ಣನಿಗೆ ಹಾಲಿನಿಂದಲೇ ಮಾಡಿದ ತಿಂಡಿಗಳು ತುಂಬಾ ಇಷ್ಟ.ಹಾಲಿನ ಖೀರ್,ಹಾಲಿನ ಪೇಡ,ಗುಲಾಬ್ ಜಾಮೂನ್ ಮುಂತಾದ ಸಿಹಿತಿಂಡಿಗಳನ್ನೆ ಮಾಡುತ್ತಾರೆ. ಇನ್ನು ಶ್ರೀಕಂಡ ಪೂರಿ ತಯಾರಿಸುತ್ತಾರೆ.ತಮಿಳುನಾಡಿನಲ್ಲಿ ಮುರುಕ್ಕ ಮತ್ತು ಸೀದೈ ಅಂದಿನ ಮುಖ್ಯ ತಿಂಡಿಗಳಲ್ಲಿ ಒಂದು.ಕರ್ನಾಟಕದ ಕೆಲವು ಕಡೆಗಳಲ್ಲಿ ಚಕ್ಕುಲಿ,ಅವಲಕ್ಕಿ,ಮತ್ತು ಬೆಲ್ಲದ ಪಾನಕ ಮಾಡುತ್ತಾರೆ.ಭಕ್ತ ಕುಚೇಲನ ನೆನಪಿಗಾಗಿ ಮನೆಯಲ್ಲಿ ತಯಾರಿಸಿದ ಅವಲಕ್ಕಿಯನ್ನೆ ಬಳಸುತ್ತಾರೆ.
          ಇನ್ನು ನಾಡಿನ ಎಲ್ಲಾ ಕಡೆ ಮುದ್ದು ಕೃಷ್ಣನ  ವೇಷ ಎಲ್ಲರ ಮನಸೂರೆಗೊಳ್ಳುವಂತದ್ದು. ಶಾಲಾ ಮಕ್ಕಳಲ್ಲೆ ಹೆಚ್ಚಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಜಾತಿ ಮತ ಭೇಧವಿಲ್ಲದೆ ಮಕ್ಕಳು ಭಾಗವಹಿಸುತ್ತಾರೆ.ಮಕ್ಕಳ ಮುದ್ದಾದ ಮುಖಕ್ಕೆ ನೀಲಮೇಘ ಬಣ್ಣ ಹಚ್ಚಿ, ತಲೆಗೊಂದು ಪುಟ್ಟ ಕಿರೀಟ ಇಟ್ಟಾಗ ಅದು ಸಾಕ್ಷಾತ್ ಕೃಷ್ಣನೇ ಎದುರು ಬಂದಂತೆ.! ಈಕೃಷ್ಣ್ನ ವೇಷಕ್ಕೆ ಪ್ರತಿ ಮಗುವೂ ಆಸಕ್ತಿ  ತೋರುವುದು ಅದೊಂದು ಪವಾಡವೆ ಸೈ!

ಸಮಸ್ತ ನಾಡ ಸಜ್ಜನರಿಗೆ ಶ್ರೀ ಕೃಷ್ಣಾಷ್ಟಮಿ ಶುಭಾಶಯಗಳು..


ಶ್ರೀ ಕೃಷ್ಣಾಷ್ಟಮಿ ಸಂಭ್ರಮದ ಫೋಟೋ ಕ್ಲಿಕ್ಕುಗಳು 







ಕೃಪೆ: ಗೂಗಲ್ , 
ಅದ್ಭುತ ಫೋಟೋಗ್ರಾಫಿಗೆ ಶಾಲಾ ತಂಡದ ನಮನಗಳು.

ಶಿಕ್ಷಕರ ದಿನಾಚರಣೆಯ ಶುಭಾಶಯಗಳು


|| ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ||


           ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾದದ್ದು, ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಸೆ.5, ಶಿಕ್ಷಕರ ದಿನಾಚರಣೆ.  ಜ್ಞಾನ ಹಾಗೂ ನೈತಿಕ ಮೌಲ್ಯಗಳನ್ನು ಹಂಚುತ್ತಾ, ಯುವ ಮನಸ್ಸುಗಳನ್ನು ಹೊಸ ಸವಾಲುಗಳಿಗೆ ಸನ್ನದ್ಧಗೊಳಿಸುವಲ್ಲಿ ಕಾಣಿಕೆ ನೀಡುವ ಶಿಕ್ಷಕರ ನೆನಪಿನಲ್ಲಿ ಪ್ರತಿವರ್ಷ ಶಿಕ್ಷಕರ ದಿನಾಚರಣೆಯ ಆಚರಣೆ ನಡೆಯುತ್ತದೆ.
          ಭಾರತದಲ್ಲಿ ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ಭಾರತದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ಹುಟ್ಟಿದ ದಿನ ಅದು. ರಾಧಾಕೃಷ್ಣನ್‌ ಹುಟ್ಟಿದ್ದು 1888ರಲ್ಲಿ, ತಮಿಳುನಾಡಿನ ತಿರುತ್ತಾನಿಯಲ್ಲಿ. ಮದ್ರಾಸ್‌ನ ಕಾಲೇಜೊಂದರಲ್ಲಿ ತತ್ವಶಾಸ್ತ್ರ ಹಾಗೂ ತರ್ಕಶಾಸ್ತ್ರದಲ್ಲಿ ಪದವಿ ಪಡೆದ ಅವರು ಅದೇ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬೋಧಕರಾದರು. ಗಂಟೆಗಟ್ಟಲೆ ವಿದ್ಯಾರ್ಥಿಗಳು ತನ್ಮಯರಾಗಿ ಪಾಠ ಕೇಳುವಂತೆ ಮಾಡುವ ವಾಕ್ಚಾತುರ್ಯ ಅವರಿಗೆ ಇತ್ತು.
          ಭಾರತೀಯ ಹಾಗೂ ಪಾಶ್ಚಿಮಾತ್ಯ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಇಂಗ್ಲಿಷ್‌ ಸಾಹಿತ್ಯವನ್ನೂ ಚೆನ್ನಾಗಿ ಓದಿಕೊಂಡರು. 1923ರಲ್ಲಿ ಅವರ ಇಂಡಿಯನ್‌ ಫಿಲಾಸಫಿಕೃತಿ ಪ್ರಕಟವಾಯಿತು. ಮಹತ್ವದ ಸಾಹಿತ್ಯ ಕೃತಿ ಎಂದು ಅದನ್ನು ಪರಿಗಣಿಸಲಾಯಿತು. ಆಮೇಲೆ ಅವರನ್ನು ಆಕ್ಸ್‌ಫರ್ಡ್‌, ಯಾಲೆ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಫಿಲಾಸಫಿ ಕುರಿತು ಪಾಠ ಹೇಳಲು ಆಹ್ವಾನ ಬಂದಿತು. ಆಂಧ್ರ ಹಾಗೂ ಬನಾರಸ್‌ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ನೇಮಕಗೊಂಡರು. 1949ರಲ್ಲಿ ರಷ್ಯಾಗೆ ಭಾರತದ ದೂತರನ್ನಾಗಿ ಕಳುಹಿಸಲಾಯಿತು. ಆಮೇಲೆ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರು. 1954ರಲ್ಲಿ ಅವರಿಗೆ ಭಾರತರತ್ನ ಗೌರವ ಸಂದಿತು. 1975ರಲ್ಲಿ ನಿಧನರಾದರೂ ಅವರ ಸೇವೆಯನ್ನು ಈಗಲೂ ಪ್ರತಿವರ್ಷ ಸ್ಮರಿಸಲಾಗುತ್ತದೆ.
          ವಿದ್ಯಾದಾನ  ಮಾಡುವ ಸರ್ವಶ್ರೇಷ್ಠವಾದ ವೃತ್ತಿ ಶಿಕ್ಷಕವೃತ್ತಿ . ನಾ ಮೇಲೊ ನೀ ಮೇಲೊ ಎಂದು ಬದುಕುವ ಇಂದಿನ ಪೀಳಿಗೆ ಗುರು ಇಲ್ಲದೆ ಬೇಕಾದುದನ್ನು ಸಾದಿಸಬಹುದ ಎಂದು ನಂಬಿದವರಿದ್ದಾರೆ. ಹಠ, ಛಲ, ಆಸೆಯಿಂದ ಸಾಧನೆ ಸಾಧ್ಯ. ಆದರೆ ಮೌಲ್ಯಯುತವಾದ, ಮಾನವೀಯತೆಯ, ತೃಪ್ತಿಕರವಾದ, ವ್ಯಕ್ತಿತ್ವ ರೂಪಗೊಳ್ಳಲು ಗುರುವಿನ ಸಾಕ್ಷಾತ್ಕಾರ ಅಗತ್ಯ. ಸಮಾಜ ನೀರಿನಂತೆ , ಗುರು ನೀರನ್ನು ನೋಡುವ ವ್ಯಕ್ತಿಯಾದರೆ ಅದರ ಪ್ರತಿಬಿಂಬವೇ ಶಿಷ್ಯ. ಗುರುವೃಂದಕ್ಕೆ ನಮನ.

Friday 4 September 2015

Hon'ble Prime Minister's interaction 
with School Children 4th September 2015 in connection with 
Teacher's Day.
Our kids watching Live Web conference




Interact with Prime Minister of India watch on Youtube


Thursday 3 September 2015

What makes a halo around the sun or moon ?
The ring around sun seen on 3-9-2015 about 11.30 am
22 Degree Halo
a ring of light 22 degrees from the sun or moon 

          A halo is a ring of light surrounding the sun or moon. Most halos appear as bright white rings but in some instances, the dispersion of light as it passes through ice crystals found in upper level cirrus clouds can cause a halo to have color.



          Halos form when light from the sun or moon is refracted by ice crystals associated with thin, high-level clouds. A 22 degree halo is a ring of light 22 degrees from the sun (or moon) and is the most common type of halo observed and is formed by hexagonal ice crystals with diameters less than 20.5 micrometers.
Light undergoes two refractions as it passes through an ice crystal and the amount of bending that occurs depends upon the ice crystal's diameter.



           A 22 degree halo develops when light enters one side of a columnar ice crystal and exits through another side. The light is refracted when it enters the ice crystal and once again 
when it leaves the ice crystal.



             The two refractions bend the light by 22 degrees from its original direction, producing a ring of light observed at 22 degrees from the sun or moon.




Courtsey: ww2010.atmos.uiuc.edu